ಇತ್ತೀಚಿನ ಕಾರ್ಯಕ್ರಮಗಳು
- ಡಿಸೆಂಬರ್ 2020 : 02.12.2020 : ಟೈಲರಿಂಗ್ತರಬೇತಿ ಕೇಂದ್ರ ಧಾರವಾಡದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಶ್ರೀ.ಮನೋಜ್ನಾಯಕ್,ಸಂಯೋಜಕರು, ಜೀವಸಾರ್ಥಕತೆ ಹುಬ್ಬಳ್ಳಿ ಅಂಗಾಂಗ ದಾನ ಕುರಿತು ಮಾತನಾಡಿ, ಅಂಗ ದಾನದ ಮಹತ್ವದ ಕುರಿತು ವಿವರಿಸಿದರು..ಕಾರ್ಯಕ್ರಮದಲ್ಲಿ ಸುಮಾರು 30 ಮಹಿಳೆಯರು ಭಾಗವಹಿಸಿದ್ದರು.
- ಡಿಸೆಂಬರ್ 2020 : 04.12.2020 : ಕಂಪ್ಯೂಟರ್ತರಬೇತಿ ಕೇಂದ್ರ ಧಾರವಾಡದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಶ್ರೀಮನೋಜ್ನಾಯಕ್,ಸಂಯೋಜಕರು, ಜೀವಸಾರ್ಥಕತೆ ಹುಬ್ಬಳ್ಳಿ ಅಂಗಾಂಗ ದಾನ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 20ಯುವಕ/ಯುವತಿಯರು ಭಾಗವಹಿಸಿದ್ದರು.
- ಡಿಸೆಂಬರ್ 2020 : 05.12.2020 : ಅಂಗಾಂಗ ದಾನದ ಕುರಿತಾದ ವೆಬ್ನಾರ್ಮತ್ತು ತಂಡ/ಗುಂಪು ಚರ್ಚೆಯನ್ನುಇಂಡಿಯನ್ಸೊಸೈಟಿ ಆಫ್ಕ್ರಿಟಿಕಲ್ಕೇರ್ರವರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಕಿಶೋರ್ಫಡ್ಕೆ ಸಂಚಾಲಕರು,ಜೀವಸಾರ್ಥಕತೆ ಅವರು ಮಿದುಳಿನ ಸಾವು ಮತ್ತು ವಿವಿಧರೀತಿಯ ಮಿದುಳಿನ ಸಾವಿನ ಸ್ಥಿತಿಯ ಕುರಿತು ವಿಷಯ ಮಂಡಿಸಿದರು.
- ಡಿಸೆಂಬರ್ 2020 : 07.12.2020 : ಧಾರವಾಡದ ಡಿಸಿ ಕಚೇರಿಯಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ಮನೋಜ್ನಾಯಕ್ಸಂಯೋಜಕರು, ಜೀವಸಾರ್ಥಕತೆ ಹುಬ್ಬಳ್ಳಿರವರು ಭಾಗವಹಿಸಿದ್ದರು.ಡಿ ಸಿ ಕಚೇರಿಯ ಸುಮಾರು 40 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಆರೋಗ್ಯ ಇಲಾಖೆ ಧಾರವಾಡರವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
- ಡಿಸೆಂಬರ್ 2020 : 20.12.2020 : ಪ್ರೇಮಬಿಂಧು ರಕ್ತನಿಧಿ ಕೇಂದ ಹುಬ್ಬಳ್ಳಿ ಅವರ ಸಂಯುಕ್ತಾಶ್ರಯದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಶ್ರೀ ಮನೋಜ್ನಾಯಕ್,ಸಂಯೋಜಕರು,ಜೀವಸಾರ್ಥಕತೆ ಹುಬ್ಬಳ್ಳಿರವರು ಅಂಗಾಂಗ ದಾನ ಮತ್ತು ಅಂಗದಾನದ ಮಹತ್ವದ ಕುರಿತು ಮಾತನಾಡಿದರು.