ಆಗಾಗ್ಗೆ ಕೇಳಲ್ಪಡುವ ಪ್ರಶ್ನೆಗಳು


ಯಾರು ದಾನಿಗಳಾಗಬಹುದು?
ಮಕ್ಕಳಿಂದ ಮುದುಕರವರೆಗೆ ಯಾರಾದರೂ ದಾನ ಮಾಡಬಹುದು. ನಿಮಗೆ ಹಿಂದೆಯಾವಾಗಲಾದರೂ ಗಂಭೀರವಾದ ಕಾಯಿಲೆಯಾಗಿದ್ದರೂ, ನೀವು ಸರಿಯಾದ ಸಂಧರ್ಭದಲ್ಲಿ ದಾನಿಗಳಾಗಬಹುದು.

ಜನರು ಅಂಗಾಗಳನ್ನು ಕೊಳ್ಳಬಹುದೇ ಅಥವಾ ಮಾರಾಟ ಮಾಡಬಹುದೇ?
ಇಲ್ಲ. “ ಮಾನವ ಅಂಗಾಂಗ ಕಸಿ ಕಾಯಿದೆ” ಯು ಅಂಗಾಂಗಗಳ ಯಾವುದೇ ವಾಣಿಜ್ಯಿಕ ವ್ಯವಹಾರಗಳನ್ನು ನಿಷೇಧಿಸುತ್ತದೆ ಮತ್ತು ಇದೊಂದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಅಂಗಾಂಗಗಳನ್ನು ಯಾರು ಪಡೆದುಕೊಳ್ಳಬಹುದು?
ಪಡೆದುಕೊಳ್ಳುವವರನ್ನು ಅವಶ್ಯಕತೆಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ, ಧೀರ್ಘಕಾಲ ಕಾಯುವಿಕೆ ಮತ್ತು ಅವಶ್ಯವೆನಿಸಿದರೆ ಅಂಗಾಂಶಗಳ ಲಕ್ಷಣಗಳು ಮತ್ತು ರಕ್ತದ ಗುಂಪುಗಳನ್ನು ಪರಿಗಣಿಸಲಾಗುತ್ತದೆ. ಪೂರೈಕೆಯು ಬೇಡಿಕೆಗಿಂತ ಕಡಿಮೆ ಇರುವುದರಿಂದ ಅಂಗಾಂಗ ಕಸಿಗೆ ಒಂದು ಕಾಯುವಿಕೆಯ ಪಟ್ಟಿಯಿರುತ್ತದೆ.

ಅಂಗಾಂಗ ದಾನಿಗಳಿಗೆ ಯಾವುದಾದರು ಧಾರ್ಮಿಕ ಅಡ್ಡಿಗಳಿವೆಯೇ?
ಹೆಚ್ಚಿನ ಧಾರ್ಮಿಕ ಗುಂಪುಗಳು ಅಂಗಾಂಗ ದಾನದ ಪರಿಕಲ್ಪನೆಯನ್ನು ಬೆಂಬಲಿಸುತ್ತವೆ. ಆದರೂ ನಿಮಗೇನಾದರೂ ಸಂಶಯಗಳಿದ್ದರೆ ನೀವು ನಿಮ್ಮ ಧಾರ್ಮಿಕ ಅಥವಾ ಆಧ್ಯಾತ್ಮಿಕ ನಾಯಕರೊಂದಿಗೆ ಚರ್ಚಿಸಬಹುದಾಗಿದೆ.

ಮೆದುಳು ಸಾವು ಹೇಗೆ ಸಂಭವಿಸುತ್ತದೆ?
ಮೆದುಳು ಸಾಮಾನ್ಯವಾಗಿ ಮೆದುಳಿನ ತೀವ್ರ ಹಾನಿಯಿಂದಾಗಿ ಅಥವಾ ಆಂತರಿಕ ಸ್ರಾವ/ಹೆಮರೇಜ್ ನಿಂದ ಸಂಭವಿಸುತ್ತದೆ ಇದರಿಂದ ಮೆದುಳಿನೆ ಎಲ್ಲಾ ಕ್ರಿಯೆಗಳೂ ನಿಂತುಹೋಗುತ್ತವೆ. ಇದು ದೊಡ್ಡದಾದ ರಸ್ತೆ ಅಪಘಾತದಿಂದ ಅಥವಾ ಪಾರ್ಶ್ವವಾಯುವಿನಿಂದಾಗುವ ಸ್ರಾವದಿಂದ ಸಂಭವಿಸಬಹುದು.

ವ್ಯಕ್ತಿಯೊಬ್ಬರ ಮೆದುಳು ಸಾವಿನ ಕುಟುಂಬದವರು ಎದುರಿಸಬೇಕಾಗಿರುವ ಆಯ್ಕೆಗಳು ಯಾವುವು?
ವೈದ್ಯಕೀಯ ಪರಿಣಿತರಿಂದ ಮೆದುಳು ಸಾವಾಗಿರುವುದನ್ನು ನಿರ್ಧರಿಸಲು ಅನೇಕ ಸರಣಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಈ ಅವಧಿಯಲ್ಲಿ ರೋಗಿಯ ಪ್ರಮುಖ ಅಂಗಗಳನ್ನು ಪೂರಕ ವ್ಯವಸ್ಥೆಯನ್ನು ಬಳಸಿ ಕ್ರಿಯಾಶೀಲವಾಗಿರುವಂತೆ ಇರಿಸಲಾಗುತ್ತದೆ. ಅವುಗಳ ಸಂಪರ್ಕವನ್ನು ಕಡಿತಗೊಳಿಸುವುದು ಕುಟುಂಬದವರ ತೀರ್ಮಾನಕ್ಕೆ ಬಿಟ್ಟದ್ದಾಗಿರುತ್ತದೆ. ಆದರೆ, ಕಣ್ಣುಗಳನ್ನು. ,ಮೂತ್ರಕೋಶ,ಯಕೃತ್ತು,ಮೇದೋಜ್ಜೀರಕ ಗ್ರಂಥಿ, ಹೃದಯ ಮತ್ತು ಹೃದಯ ಕವಾಟಗಳನ್ನು ಅವುಗಳ ಅವಶ್ಯಕತೆ ಇರುವವರಿಗೆ ದಾನ ಮಾಡಲು ಬಯಸಿದರೆ ದುರಂತವನ್ನು ಗೆಲುವಿನ ಕಡೆಗೆ ತಿರುಗಿಸಬಹುದು. ಇದು ಬೇರೊಬ್ಬರಿಗೆ ಎರಡನೇ ಜೀವವನ್ನು ಕೊಡಲು ಒಂದು ಅವಕಾಶವಾಗಿರುತ್ತದೆ.

ಅಂಗಾಂಗ ಕಸಿಯನ್ನು ಎಷ್ಟು ಶೀಘ್ರವಾಗಿ ಮಾಡಲಾಗುತ್ತದೆ?
ವೈದ್ಯಕೀಯ ಮಾನದಂಡಗಳನ್ನು ಪೂರೈಸುವ ಯಾರಾದರೂ ಅವರ ಅಂಗಾಂಗಳನ್ನು ದಾನಿಯ ಕಾರ್ಡಿಗೆ ಸಹಿ ಹಾಕುವುದರಿಂದ ಮಾಡಬಹುದು ಅದು ಅವರ ಬಯಕೆಯನ್ನು ಹೇಳುತ್ತದೆ. ಈ ಸಹಿ ಮಾಡಲ್ಪಟ್ಟ ದಾನಿಯ ಕಾರ್ಡ್ ಒಂದು ಕಾನೂನಾತ್ಮಕ ದಾಖಲೆಯಾಗಿರುತ್ತದೆ ಮತ್ತು ವೈದ್ಯರು ಅಂಗಾಂಗಗಳನ್ನು ಮತ್ತು ಅಂಗಾಂಶಗಳನ್ನು ಸಾವಿನ ನಂತರ ಸಂರಕ್ಷಿಸುತ್ತಾರೆ ಅದಕ್ಕೆ ಅವರ ಹತ್ತಿರದ ಸಂಬಂಧಿಕರಿಂದ ಯಾವುದೇ ಅಡಚಣೆಗಳಿರಬಾರದು. ಅದಕ್ಕಾಗಿ ನಿಮ್ಮ ಕುಟುಂಬದವರು ಇದಕ್ಕೆಸಂಬಂಧಿಸಿದಂತೆ ನಿಮ್ಮ ಭಾವನೆಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅಂಗಾಂಗಗಳನ್ನು ಆರೋಗ್ಯದಿಂದ ಜೀವಿಸುವವರೂ ದಾನ ಮಾಡಬಹುದೇ?
ವೈದ್ಯಕೀಯ ಮಾನದಂಡಗಳನ್ನು ಪೂರೈಸುವ ಯಾರಾದರೂ ಕೂಡ ದಾನಿಗಳ ಕಾರ್ಡಿಗೆ ಸಹಿ ಮಾಡುವುದರಿಂದ ಮಾಡಬಹುದಾಗಿದೆ ಅದು ಅವರ ಅಭಿಲಾಷೆಯನ್ನು ಹೇಳುತ್ತದೆ.